ಸ.ಹಿ.ಪ್ರಾ.ಶಾಲೆ.ಸಿಂದಬಂದಗಿ.ತಾ/ಹುಮನಾಬಾದ.ಜಿ/ಬೀದರ್.
ಶಿಕ್ಷಕರ ಹೆಸರು: ಶ್ರೀಮತಿ ಅಲ್ಪಾವತಿ ಅಂಬೂರೆ.
ವಿಷಯ:ಗಣಿತ.
ತರಗತಿ:ನಲಿ-ಕಲಿ.(೧ನೇ)
ಘಟಕ:1.ಪೂರ್ವಭಾವಿ ಚಟುವಟಿಕೆಗಳು.
ಚಟುವಟಿಕೆಯ ಹೆಸರುಗಳು: ೧.ಮೊಟ್ಟೆಯಿಂದ ಹೊರಬಂದ ಕೋಳಿ ಮರಿ
೨.ಪೆಂಗ್ವಿನ್.
೩.ಕ್ರಾಪ್ಟ.
೪.ಹಾಡು.
೫.ಚೆಂಡು.
ಅವಧಿ: ಜೂನ್+ಜುಲೈ.
ಕಲಿಕೆಯ ಅಂಶಗಳು.
1.ಮೂರ್ತವಸ್ತುಗಳನ್ನು ಬಳಸಿಕೊಂಡು ಅನೌಪಚಾರಿಕ ಗಣಿತದ ಪರಿಕಲ್ಪನೆ ಮೂಡಿಸುವುದು.
2.ಆಕಾರ ಮತ್ತು ಲಕ್ಷಣಗಳ ಆಧಾರದ ಮೇಲೆ ವಸ್ತುಗಳನ್ನು ವಿಂಗಡಿಸುವುದು.
3.ಒಂದೇ ಅಳತೆಯ ಮತ್ತು ಬಣ್ಣದ ವಸ್ತುಗಳನ್ನು ವಿಂಗಡಿಸುವುದು.
4.ಮೇಲೆ-ಕೆಳಗೆ,ಎಡ-ಬಲ,ದೂರ-ಹತ್ತಿರ, ಹಾಗೂ ಹಿಂದೆ-ಮುಂದೆ ಸ್ಥಾನಗಳ ಪರಿಕಲ್ಪನೆ ಮೂಡಿಸುವುದು.
5.ಒಂದು ಮತ್ತು ಹಲವು ಹಾಗೂ ಹೆಚ್ಚು-ಕಡಿಮೆ-ಸಮ ಪರಿಣಾಮಗಳು ಪರಿಕಲ್ಪನೆ ಮೂಡಿಸುವುದು.
6.ಕಲಿಕೆಯು ಸಂತಸದಾಯಕವಾಗಿರುವಂತೆ ಹಾಡು ಮತ್ತು ಕ್ರಾಫ್ಟ್ ಗಳನ್ನು ಮಾಡಿಸುವುದು.
7.ಹೊರಾಂಗಣ ಮತ್ತು ಒಳಾಂಗಣ ಆಟಗಳ ಮೂಲಕ ಕಲಿಕೆ.
ಕಲಿಕಾ ಪ್ರಕ್ರಿಯೆಗಳು:
1.ಬೇರೆ-ಬೇರೆ ಮರ-ಗಿಡ ಅಥವಾ ಸಸ್ಯದ ಎಲೆಗಳನ್ನು ಸಂಗ್ರಹಿಸಿ,ಬೇರೆ-ಬೇರೆ ಹಣ್ಣು-ತರಕಾರಿ ಬಳಸಿಕೊಂಡು ಆಕಾರ ಮತ್ತು ಲಕ್ಷಣಕ್ಕಗನುಗುಣವಾಗಿ ಬೇರ್ಪಡಿಸಲು ಹೇಳುವುದು.
2.ನಲಿ-ಕಲಿ ಕಿಟ್ ನಲ್ಲಿಯ ಸಾಮಗ್ರಿ ಬಳಸಿ ಈ ಚಟುವಟಿಕೆ ಮಾಡಿಸುವುದು.
3.ತರಗತಿಯಲ್ಲಿನ ಮಕ್ಕಳನ್ನು ಬಳಸಿ ಸ್ಥಾನಗಳನ್ನು (ಎಡ-ಬಲ, ಹಿಂದೆ-ಮುಂದೆ, ದೂರ-ಹತ್ತಿರ) ಚಟುವಟಿಕೆ ಮಾಡುವುದು.
4.ಕಲ್ಲು ಮತ್ತು ಬೀಜಗಳನ್ನು ಬಳಸಿ ಒಂದು ಮತ್ತು ಹಲವು, ಹೆಚ್ಚು-ಕಡಿಮೆ-ಸಮ ಪರಿಮಾಣಗಳ ಚಟುವಟಿಕೆ ಮಾಡಿಸುವುದು.
5.ಕಲಿಕೆಗೆ ಪೂರಕವಾದ ಹಾಡುಗಳನ್ನು ಹಾಡಿಸುವುದು.
6.ಮಕ್ಕಳಲ್ಲಿನ ಸೃಜನಶೀಲತೆ ಹೊರತರಲು ಕ್ರಾಫ್ಟ್ ಮಾಡಿಸುವುದು.
7.ಆಟಗಳ ಮೂಲಕ ಈ ಚಟುವಟಿಕೆಗಳನ್ನು ಮಾಡಿಸುವುದು.
ಕಲಿಕಾ ಸಾಧನೆಗಳು:
1.ಮಕ್ಕಳು ಆಕಾರ ಮತ್ತು ಲಕ್ಷಣದ ಆಧಾರದಲ್ಲಿ ವಸ್ತುಗಳನ್ನು ಬೇರ್ಪಡಿಸುವರು.
2.ಒಂದೇ ಅಳತೆ ಮತ್ತು ಬಣ್ಣದ ವಸ್ತುಗಳನ್ನು ಗುರ್ತಿಸುವರು.
3.(ವಸ್ತುಗಳಿರುವ) ಸ್ಥಾನವನ್ನು ನಿರ್ದಿಷ್ಟವಾಗಿ ಗುರ್ತಿಸುವರು.
4.ಎರಡು ವಸ್ತುಗಳನ್ನು ಹೋಲಿಕೆ ಮಾಡಿ ಪರಿಮಾಣವನ್ನು ಗುರ್ತಿಸುವಲ್ಲಿ ಸಮರ್ಥರಾಗುವರು.
5.ಅಭ್ಯಾಸ ಪುಸ್ತಕದಲ್ಲಿರುವ ಅಭ್ಯಾಸದ ಹಾಳೆಗಳನ್ನು ಪೂರ್ಣಗೊಳಿಸುರು.
6.ಮಕ್ಕಳು ಮಾಡಿದ ಕ್ರಾಪ್ಟನ್ನು ಹಂದರಕ್ಕೆ ಹಾಕುವುದು ಹಾಗೂ ಕೃತಿ ಸಂಪುಟಕ್ಕೆ ಸೇರಿಸುವುದು.
ಘಟಕ 2:(1-5) ಅಂಕಿಗಳ ಪರಿಕಲ್ಪನೆ ಮತ್ತು ಸಂಕಲನ ಹಾಗೂ ವ್ಯವಕಲನ.
ಅವಧಿ: ಜುಲೈ-ಸೆಪ್ಟೆಂಬರ್
ಕಲಿಕೆಯ ಅಂಶಗಳು:
1.(1-5) ವರೆಗಿನ ಅಂಕಿಗಳ ಎಣಿಕೆ ಮತ್ತು ಬರವಣಿಗೆ.
2.(1-5) ವರೆಗಿನ ಅಂಕಿಗಳ ಬಳಸಿ ಮೊತ್ತ 5ಕ್ಕೆಮಿರದಂತೆ ಸಂಕಲನ.
3.(1-5) ವರೆಗಿನ ಅಂಕಿಗಳ ಬಳಸಿ ವ್ಯವಕಲನ.
ಕಲಿಕಾ ಪ್ರಕ್ರಿಯೆಗಳು:
1.ಹಾಡು ಮತ್ತು ಆಟಗಳ ಮೂಲಕ ಅಂಕಿಗಳ ಕಲ್ಪನೆ ಮೂಡಿಸುವುದು.
2.ಮೂರ್ತವಸ್ತುಗಳನ್ನು ಬಳಸಿ ಅಂಕಿಗಳ ಎಣಿಕೆ ಮತ್ತು ಕಲ್ಪನೆ ಮೂಡಿಸುವುದು.
3.ನಲಿ-ಕಲಿ ಕಿಟ್ ನಲ್ಲಿಯ ರಬ್ಬರ್ ಅಂಕಿಗಳನ್ನು ಬಳಸಿ ಕಲ್ಪನೆ ಮೂಡಿಸುವುದು.
4.ಕಾರ್ಡನಲ್ಲಿರುವ ಅಂಕಿಗಳ ಮೇಲೆ ಕಲ್ಲು ಮತ್ತು ಬೀಜಗಳನ್ನು ಇಡುವುದರ ಮೂಲಕ ಬರವಣಿಗೆ ಕಲ್ಪನೆ ಮೂಡಿಸುವುದು.
5.ಕಪ್ಪುಹಲಗೆಯ ಮೇಲೆ ಅಂಕಿಗಳನ್ನು ಬರೆಯಿಸುವುದು.
6.ಸಂಕಲನ ಮತ್ತು ವ್ಯವಕಲನದ ಹಾಡುಗಳನ್ನು ಹಾಡಿಸುವುದು ಮತ್ತು ಆಟಗಳನ್ನು ಆಡಿಸುವುದು.
7.ಮೂರ್ತವಸ್ತುಗಳನ್ನು, ಕಲ್ಲು, ಬೀಜಗಳನ್ನು ಹಾಗೂ ಮಕ್ಕಳ ಗುಂಪು ಮಾಡುವುದರ ಮೂಲಕ ಸಂಕಲನ ಮತ್ತು ವ್ಯವಕಲನ ಮಾಡಿಸುವುದು.
8.ಕಲಿಕಾ ಕಿಟ್ ನಲ್ಲಿಯ ಮಿಂಚು ಪಟ್ಟಿಗಳನ್ನು ಬಳಸಿ ಸಂಕಲನ ಮತ್ತು ವ್ಯವಕಲನ ಮಾಡಿಸುವುದು.
ಕಲಿಕಾ ಸಾಧನೆಗಳು:
1.ಮಕ್ಕಳು (1-5) ರವರೆಗಿನ ಅಂಕಿಗಳನ್ನು
ಗುರ್ತಿಸಲು, ಎಣಿಕೆ ಮಾಡಲು ಹಾಗೂ ಬರೆಯಲು ಸಮರ್ಥರಾಗುವರು.
2.ಅಭ್ಯಾಸ ಪುಸ್ತಕವನ್ನು ಪೂರ್ಣಗೊಳಿಸುವರು.
3.ಮಕ್ಕಳು (ಅಡ್ಡ ಮತ್ತು ಕಂಬ ಸಾಲಿನ )ಸಂಕಲನ ಮತ್ತು ವ್ಯವಕಲನ ಲೆಕ್ಕಗಳನ್ನು ಬಿಡಿಸಲು ಸಮರ್ಥರಾಗುವರು.
4.ಕಾರ್ಡ ಮತ್ತು ಅಭ್ಯಾಸಪುಸ್ತಕದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಸಮರ್ಥರಾಗುವರು.
ಘಟಕ 3.(6-9) ವರೆಗಿನ ಅಂಕಿಗಳ ಎಣಿಕೆ ಮತ್ತು ಬರವಣಿಗೆ, ಸಂಕಲನ ಮತ್ತು ವ್ಯವಕಲನ, ಹಾಗೂ....
ಚಟುವಟಿಕೆಯ ಹೆಸರುಗಳು:
ಅವಧಿ: ಸೆಪ್ಟೆಂಬರ್-ಡಿಸೆಂಬರ್
ಕಲಿಕೆಯ ಅಂಶಗಳು:
1.(6-9) ವರೆಗಿನ ಅಂಕಿಗಳ ಎಣಿಕೆ ಮತ್ತು ಬರವಣಿಗೆ.
2.(1-9) ವರೆಗಿನ ಅಂಕಿಗಳ ಬಳಸಿ ಹೆಚ್ಚು-ಕಡಿಮೆ-ಸಮ, ಏರಿಕೆ-ಇಳಿಕೆ ಹಾಗೂ ಹಿಂದೆ - ಮುಂದೆ -ಮಧ್ಯ ಮಾಡುವುದು.
3.(1-9) ವರೆಗಿನ ಅಂಕಿಗಳನ್ನು ಬಳಸಿ ಸಂಕಲನ ಮತ್ತು ವ್ಯವಕಲನ ಮಾಡುವುದು.
4.ಸೊನ್ನೆ ಕಲ್ಪನೆ ಮತ್ತು ಸೊನ್ನೆ ಬಳಸಿ ಸಂಕಲನ ಮತ್ತು ವ್ಯವಕಲನ.
5.ಹತ್ತರ ಕಲ್ಪನೆ.
ಕಲಿಕಾ ಪ್ರಕ್ರಿಯೆಗಳು:
1.ಹಾಡು ಮತ್ತು ಆಟಗಳ ಮೂಲಕ (6-9) ಅಂಕಿಗಳ ಕಲ್ಪನೆ ಮೂಡಿಸುವುದು.
2.ಮೂರ್ತವಸ್ತುಗಳನ್ನು ಬಳಸಿ ಅಂಕಿಗಳ ಕಲ್ಪನೆ ಮೂಡಿಸುವುದು.
3.ರಬ್ಬರ್ ಅಂಕಿಗಳ ಮೇಲೆ ಬೆರಳಾಡಿಸುವ ಮೂಲಕ ಮತ್ತು ಅಂಕಿ ಕಾರ್ಡ್ಗಳ ಮೇಲೆ ಕಲ್ಲು ಅಥವಾ ಬೀಜ ಜೋಡಿಸುವುದರ ಮೂಲಕ ಬರವಣಿಗೆ ಕಲ್ಪನೆ ಮೂಡಿಸುವುದು.
4.(6-9),(1-9) ಅಂಕಿಗಳನ್ನು ಕಪ್ಪು ಹಲಗೆಯ ಮೇಲೆ ಬರೆಸುವುದು.
5.ಕಲ್ಲು,ಬೀಜ, ವಸ್ತು, ಚಿತ್ರಗಳನ್ನು ಬಳಸಿ ಹೆಚ್ಚು-ಕಡಿಮೆ-ಸಮ ಗುರ್ತಿಸುವುದು.
6.ಕಿಟ್ ನಲ್ಲಿಯ ಮಿಂಚು ಪಟ್ಟಿಗಳನ್ನು (1-9)ಬಳಸಿ ಏರಿಕೆ-ಇಳಿಕೆ ಹಾಗೂ ಹಿಂದೆ-ಮುಂದೆ-ಮಧ್ಯದ ಅಂಕಿಗಳನ್ನು ಜೋಡಿಸುವುದು.
7.ಹಾಡು ಮತ್ತು ಆಟದ ಮೂಲಕ ಸಂಕಲನ ಮತ್ತು ವ್ಯವಕಲನ ಮಾಡಿಸುವುದು.
8.ವಸ್ತು, ಕಲ್ಲು ಮತ್ತು ಬೀಜಗಳನ್ನು ಬಳಸಿ ಸಂಕಲನ ಮತ್ತು ವ್ಯವಕಲನ ಮಾಡಿಸುವುದು.
9.ಎಣಿಕೆ ಮಾಡಲು ವಸ್ತು (ಏನು) ಇಲ್ಲದಿದ್ದರೆ ಸೊನ್ನೆ ಎಂಬ ಕಲ್ಪನೆ ಮೂಡಿಸುವುದು.
10.ರಬ್ಬರ್ ಅಂಕಿ ಮತ್ತು ಕಾರ್ಡ್ ಮೂಲಕ ಸೊನ್ನೆಯ ಬರವಣಿಗೆ ಕಲ್ಪನೆ ಮೂಡಿಸುವುದು.
11.ಸೊನ್ನೆಯಲ್ಲಿ ಅಂಕಿ ಅಥವಾ ಅಂಕಿಯಲ್ಲಿ ಸೊನ್ನೆ (ವಸ್ತುಗಳನ್ನು ) ಬಳಸಿ ಸಂಕಲನ ಮತ್ತು ವ್ಯವಕಲನ ಮಾಡಿಸುವುದು.
12.ವಸ್ತುಗಳನ್ನ ಹತ್ತರ ಗುಂಪುಗಳಾಗಿ ವಿಂಗಡಿಸಿ ಹತ್ತರ ಕಲ್ಪನೆ ಮೂಡಿಸುವುದು.
ಘಟಕ 4::11-19ಸಂಖ್ಯೆಗಳು
ಅವಧಿ:ಡಿಸೆಂಬರ್-ಫೆಬ್ರವರಿ
ಕಲಿಕೆಯ ಉದ್ದೇಶಗಳು: ಸಂಖ್ಯೆಗಳ ಕಲ್ಪನೆ, ಸ್ಥಾನಬೆಲೆಯ ಕಲ್ಪನೆ, ಸಂಖ್ಯೆಗಳ ಜೋಡಣೆ, ಸಂಕಲನ ಮತ್ತು ವ್ಯವಕಲನ ಹಾಗೂ ಮಿಶ್ರಕ್ರಿಯೆ.
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಸಂಖ್ಯೆಗಳ ಕಲ್ಪನೆ:11-19 ವರೆಗಿನ ಸಂಖ್ಯೆಗಳನ್ನು ಚಿತ್ರಗಳ ಮೂಲಕ, ಕಲ್ಲು ಮತ್ತು ಬೀಜಗಳನ್ನು ಗುಂಪು ಮಾಡುವುದರ ಮೂಲಕ ತಿಳಿಸುವುದು.
2.ಸ್ಥಾನಬೆಲೆ ಕಲ್ಪನೆ: ಕಡ್ಡಿಗಳನ್ನು ಹತ್ತು ಮತ್ತು ಬಿಡಿಗಳಾಗಿ ವಿಂಗಡಿಸಿ , ಸಂಖ್ಯೆಯನ್ನು ಓದಲು ಹಾಗೂ ಬರೆಯಲು ತಿಳಿಸುವುದು.ನಲಿಕಲಿ ಕಿಟ್ ನಲ್ಲಿಯ ಮಣಿಗಳನ್ನು ಬಳಸಿ ಸ್ಥಾನ ಬೆಲೆಯ ಕಲ್ಪನೆ ಮೂಡಿಸುವುದು. ನಲಿಕಲಿ ಕಿಟ್ ನಲ್ಲಿಯ ಅಬಾಕಸ್ ಪಟ್ಟಿ ಹಾಗೂ ಮಣಿಗಳನ್ನು ಬಳಸಿ ಸಂಖ್ಯೆಗಳನ್ನು ಬಿಡಿ- ಹತ್ತು ಗಳಾಗಿ ಬರೆಯಲು ಹೇಳುವುದು.
3. ಸಂಖ್ಯೆಗಳು ಜೋಡಣೆ :
1-19ರ ವರೆಗಿನ ಸಂಖ್ಯೆಗಳನ್ನು ಕಲ್ಲುಗಳು ,ಬೀಜಗಳು ಅಥವಾ ತರಗತಿಯಲ್ಲಿನ ಮಕ್ಕಳನ್ನು ಹಾಗೂ ಮಿಂಚುಪಟ್ಟಿ ಗಳನ್ನು ಹಾಗೂ ಆಟಗಳ ಮೂಲಕ ಏರಿಕೆ -ಇಳಿಕೆ ,ಹೆಚ್ಚು ಕಡಿಮೆ -ಸಮ ಹಾಗೂ ಹಿಂದೆ-ಮುಂದೆ -ಮಧ್ಯ ಕ್ರಮಗಳಲ್ಲಿ ಜೋಡಿಸುವುದನ್ನು ತಿಳಿಸುವುದು.
4. ಸಂಕಲನ ವ್ಯವಕಲನ ಮತ್ತು ಮಿಶ್ರ ಕ್ರಿಯೆಗಳು:
ನಲಿಕಲಿ ಕಿಟ್ ನಲ್ಲಿಯ ಮಿಂಚುಪಟ್ಟಿ ಗಳನ್ನು ಬಳಸಿಕೊಂಡು ಹಾಗೂ ಕಲ್ಲು ಅಥವಾ ಬೀಜಗಳಿಂದ ಸಂಕಲನ ಮತ್ತು ವ್ಯವಕಲನ ಹಾಗೂ ಕ್ರಿಯೆಗಳನ್ನು ಮಾಡಿಸುವುದು.
ಅಡ್ಡ ಮತ್ತು ಕಂಬ ಸಾಲಿನ ಮೊತ್ತ ಹಾಗೂ ವ್ಯತ್ಯಾಸ 19ಕ್ಕೆ ಮೀರದಂತೆ ಸಂಕಲನ ಮತ್ತು ವ್ಯವಕಲನ ಕ್ರಿಯೆಗಳನ್ನು ಮಾಡಿಸುವುದು ಹಾಗೂ ದಶಕ ಸಹಿತ ಸಮಸ್ಯೆಗಳನ್ನು ಬಿಡಿಸುವುದು. ಮಿಶ್ರ ಕ್ರಿಯೆಯಲ್ಲಿ ಮೊದಲು ಸಂಕಲನ ಮಾಡಿ ಮೊತ್ತದಲ್ಲಿ ವ್ಯವಕಲನ ಮಾಡುವುದನ್ನು ತಿಳಿಸುವುದು.
ಘಟಕ 5.
ಅವಧಿ: ಫೆಬ್ರವರಿ-ಮಾರ್ಚ
ಕಲಿಕೆಯ ಉದ್ದೇಶಗಳು:
*ಆಕೃತಿಗಳ ಪರಿಚಯ
*ಸಮಯದ ಕಲ್ಪನೆ
*ಅನೌಪಚಾರಿಕ ಉದ್ದಳತೆಗಳ ಪರಿಚಯ
*ಹಣದ ಪರಿಚಯ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಆಕೃತಿಗಳ ಪರಿಚಯ:
ಕಾಗದ ಮಡಚಿ ವಿವಿಧ ಆಕೃತಿಗಳನ್ನು ಮಾಡುವುದು.ಚೌಕ,ಆಯತ,ತ್ರಿಭುಜ ಹಾಗೂ ವೃತ್ತದ ಚಿತ್ರ ಬಿಡಿಸಿ ಬಣ್ಣ ತುಂಬುವುದು.
2.ಸಮಯದ ಕಲ್ಪನೆ:
ಹಾಡಿನ ಮೂಲಕ ವಾರದ ದಿನಗಳನ್ನು ಹೇಳಿಸುವುದು.ಕ್ಯಾಲೆಂಡರ ಮೂಲಕ ವಾರದಲ್ಲಿ ಏಳು ದಿನಗಳೆಂದು ತಿಳಿಸುವುದು
3.ಉದ್ದಳತೆಗಳ ಪರಿಚಯ:
ಅನೌಪಚಾರಿಕ ಮಾನಗಳಾದ ಗೇಣು,ಮೊಳ,ಮಾರು, ಹಾಗೂ ಹೆಜ್ಜೆ ಗಳ ಮೂಲಕ ಮೇಜು, ಕಪ್ಪ ಹಲಗೆ, ಪುಸ್ತಕ, ಕಿಟಕಿ, ಗೋಡೆ,ಕೋಣೆಯಿಂದ ಕೋಣೆಗೆ ಉದ್ದಳತೆ ಮಾಡಿಸುವುದು.
ಹೂ,ಹಗ್ಗ, ಪುಸ್ತಕ ಯಾವ ಮಾನದಿಂದ ಅಳೆಯಬಹುದು ಎಂದು ತಿಳಿಸುವುದು.
ತರಗತಿ: 2ನೇ ವಿಷಯ: ಗಣಿತ
ಘಟಕ:1.ಸಂಖ್ಯೆಗಳು.(1-99)
ಕಲಿಕಾಂಶಗಳು ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.21ರಿಂದ99 ವರೆಗಿನ ಸಂಖ್ಯೆಗಳನ್ನು ಹತ್ತು ಮತ್ತು ಬಿಡಿಗಳಾಗಿ ಎಣಿಸುವುದು, ಗುರುತಿಸುವುದು,.ಕ್ರಮಾಗತವಾಗಿ ಹೊಂದಿಸುವುದು ಹಾಗೂ ಬರೆಯುವುದು.ಸಂಖ್ಯೆಗಳನ್ನು ಹತ್ತು-ಬಿಡಿಗಳಾಗಿ ಎಣಿಸಲು ಮತ್ತು ಬರೆಯಲು ನಲಿಕಲಿ ಕಿಟ್ ನಲ್ಲಿಯ ಮಣಿಗಳ (ಕಡ್ಡಿಗಳ) ಕಟ್ಟುನ್ನು ಬಳಸುವುದು.
2.ಎರಡು ಅಂಕಿಗಳುಳ್ಳ ಸಂಖ್ಯೆಯಲ್ಲಿ ಸ್ಥಾನ ಬೆಲೆ ಹೇಳುವುದು, ವಿಸ್ತರಿಸಿ ಬರೆಯುವುದು.
ಇದನ್ನು ನಲಿಕಲಿ ಕಿಟ್ ನಲ್ಲಿಯ ಅಬಾಕಸ್ ಪಟ್ಟಿ ಮತ್ತು ಮಣಿಗಳನ್ನು ಬಳಸಿ ಸ್ಥಾನ ಬೆಲೆಯನ್ನು ಬರೆಯುವುದು.
3.ಮಿಂಚುಪಟ್ಟಿಗಳನ್ನು (< >) ಬಳಸಿ ಸಂಖ್ಯೆಗಳನ್ನು ಗರಿಷ್ಠ-ಕನಿಷ್ಠ, ಏರಿಕೆ-ಇಳಿಕೆ, ಹಿಂದೆ- ಮುಂದೆ -ಮಧ್ಯ ಹಾಗೂ ಚಿಹ್ನೆಗಳು ಉಪಯೋಗಿಸಿ ಚಿಕ್ಕದು -ದೊಡ್ಡದು ಗುರ್ತಿಸಿ ಬರೆಯುವುದು.
ಕಲ್ಲುಗಳನ್ನು ಗುಂಪು ಮಾಡುವುದರ ಮೂಲಕ ಸರಿ-ಬೆಸ ಸಂಖ್ಯೆಗಳನ್ನು ಗುರ್ತಿಸಿ ಬರೆಯುವುದು.
ಘಟಕ:2.ಸಂಕಲನ, ವ್ಯವಕಲನ ಹಾಗೂ ಮಿಶ್ರಕ್ರಿಯೆ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು.
1.ಕಡ್ಡಿಗಳ ಕಟ್ಟುಗಳನ್ನು, ಮಿಂಚು ಪಟ್ಟಿಗಳನ್ನು ಬಳಸಿ ಮೊತ್ತ 99ಕ್ಕೆಮಿರದಂತೆ ದಶಕ ರಹಿತ ಮತ್ತು ದಶಕ ಸಹಿತ ಸಂಕಲನ ಮಾಡುವುದು.
2.ವ್ಯತ್ಯಾಸ 99ಕ್ಕೆ ಮೀರದಂತೆ ದಶಕ ರಹಿತ ಮತ್ತು ದಶಕ ಸಹಿತ ವ್ಯವಕಲನ ಮಾಡುವುದು.
3.ಅಡ್ಡ ಮತ್ತು ಕಂಬ ಸಾಲಿನ ದಶಕ ಸಹಿತ ಮತ್ತು ದಶಕ ರಹಿತ ಮಿಶ್ರಕ್ರಿಯೆ ಸಮಸ್ಯೆಗಳನ್ನು ಬಿಡಿಸುವುದು.
4.ನಿತ್ಯಜೀವನಕ್ಕೆ ಸಂಬಂಧಿಸಿದಂತೆ ಸಂಕಲನ, ಹಾಗೂ ವ್ಯವಕಲನ ಸಮಸ್ಯೆಗಳನ್ನು (ಬಾಯಿಲೆಕ್ಕ) ಬಿಡಿಸುವುದು.
ಘಟಕ:3.ಗುಣಾಕಾರ ಮತ್ತು ಭಾಗಾಕಾರ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ವಸ್ತುಗಳನ್ನು ಗುಂಪು ಮಾಡುವುದರ ಮೂಲಕ ಗುಣಾಕಾರದ ಪರಿಕಲ್ಪನೆ ಮೂಡಿಸುವುದು.
2.ಗುಣಾಕಾರದಲ್ಲಿ ಗುಣ್ಯ,ಗುಣಕ,ಗುಣಲಬ್ದಗಳ ಪರಿಚಯ ಸಚಿತ್ರವಾಗಿ ಉದಾಹರಣೆಗಳು ಮೂಲಕ ತಿಳಿಸುವುದು.
3.ಅಡ್ಡ ಮತ್ತು ಕಂಬ ಸಾಲಿನಲ್ಲಿ ಕಡ್ಡಿಗಳನ್ನು ಜೋಡಿಸಿ 2ರಿಂದ 5ವರೆಗೆ ಹಾಗೂ 10ಮಗ್ಗಿಗಳನ್ನು ಹೇಳುವುದು.
ಘಟಕ:4.ರೇಖಾಕೃತಿಗಳು.
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಪರಿಸರದಲ್ಲಿ ಕಂಡುಬರುವ ಮೇಲ್ಮೈವುಳ್ಳ ವಸ್ತುಗಳನ್ನು ಬಿಂದು, ರೇಖೆ ಹಾಗೂ ವಕ್ರರೇಖೆ ಹೆಸರಿಸುವುದು.
2.ಕಡ್ಡಿ,ಹಗ್ಗ ಇತ್ಯಾದಿಗಳನ್ನು ಬಳಸಿ ಸರಳ ರೇಖೆ ಹಾಗೂ ವಕ್ರರೇಖೆ ತೋರಿಸುವುದು
3.ನಲಿಕಲಿ ಕಿಟ್ ನಲ್ಲಿಯ ಆಯತ ಘನ,ತ್ರಿಭುಜ,ಘನ(ಚೌಕ) ಹಾಗೂ ಗೋಲಗಳನ್ನು (ಘನಾಕೃತಿಗಳನ್ನು) ಪರಿಚಯಿಸುವುದು.
4.ವೃತ್ತ, ಚೌಕ,ಆಯತ ಮತ್ತು ತ್ರಿಭುಜಗಳನ್ನು ಗುರ್ತಿಸಿ,ಕೈಯಿಂದ ಆಕೃತಿಗಳನ್ನು ರಚಿಸುವುದು.
ಘಟಕ:5.ಅನೌಪಚಾರಿಕ ಅಳತೆ ಮಾನಗಳು
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಅನೌಪಚಾರಿಕ ಉದ್ದದ ಅಳತೆ ಮಾನಗಳಾದ ಗೇಣು,ಮೊಳ,ಮಾರು ಹಾಗೂ ಹೆಜ್ಜೆ ಗಳ ಪರಿಚಯ ಮತ್ತು ಔಪಚಾರಿಕ ಉದ್ದದ ಮಾನದ ಬಗ್ಗೆ ತಿಳಿಸುವುದು.
2.ತರಗತಿಯಲ್ಲಿನ ಮಕ್ಕಳ ಎತ್ತರವನ್ನು ಗೇಣು,ಮೊಳದಲ್ಲಿ ಅಳೆಯುವುದು.
3.ಔಪಚಾರಿಕ ಮಾನಗಳ ಪರಿಚಯಿಸುತ್ತಾ ತೂಕದ ಬಟ್ಟುಗಳ ಬಗ್ಗೆ ತಿಳಿಸುವುದು.
4.ತಕ್ಕಡಿಯನ್ನು ತಯಾರಿಸಿ ಎರಡು ವಸ್ತುಗಳನ್ನು ತೂಗುವುದು.
5.ಅನೌಪಚಾರಿಕ ಗಾತ್ರದ ಮಾನಗಳಾದ ಲೋಟ,ಗ್ಲಾಸು,ಬಕೇಟು,ಪಾತ್ರೆಗಳಿಂದ ನೀರನ್ನು ಅಳೆಯುವುದು ಹಾಗೂ ಕಾಗದದಿಂದ ತಯಾರಿಸಿದ ಔಪಚಾರಿಕ ಮಾನಗಳಾದ ಲೀಟರ್ ಮಾಪಕಗಳನ್ನು ತೋರಿಸುವುದು.
6.ನಲಿಕಲಿ ಕಿಟ್ ನಲ್ಲಿಯ ಅಳತೆ ಮಾಪನಗಳನ್ನು ತೋರಿಸುವುದು.
ಘಟಕ:6.ಸಮಯ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು.
1.ಸಮಯವನ್ನು ಹಗಲು-ರಾತ್ರಿ, ಬೆಳಿಗ್ಗೆ-ಮಧ್ಯಾಹ್ನ-ಸಂಜೆ ಇತ್ಯಾದಿಗಳಿಗಾಗಿ ಗುರ್ತಿಸುವುದು.
2.ಕ್ಯಾಲೆಂಡರ್ ಮೂಲಕ ವಾರದ ದಿನ ಮತ್ತು ತಿಂಗಳಗಳ ಪರಿಚಯಿಸುವುದು.
ಘಟಕ:7.ನೋಟು ಮತ್ತು ನಾಣ್ಯಗಳು.
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ನೋಟು ಮತ್ತು ನಾಣ್ಯಗಳನ್ನು ಬಳಸಿಕೊಂಡು 10ರೂ ವರೆಗಿನ ವಿವಿಧ ನಾಣ್ಯಗಳನ್ನು ಮತ್ತು ನೋಟುಗಳನ್ನು ಜೋಡಿಸುವುದು.
ತರಗತಿ:3ನೇ. ವಿಷಯ: ಗಣಿತ
ಘಟಕ:1.ಸಂಖ್ಯೆಗಳು.
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.100ರಿಂದ500 ರವರೆಗಿನ ಸಂಖ್ಯೆಗಳು ಅಬಾಕಸ ಮೂಲಕ ನೂರು,ಹತ್ತು ಮತ್ತು ಬಿಡಿಗಳಾಗಿ ಎಣಿಸುವುದು, ಓದುವುದು ಮತ್ತು ವಿಸ್ತರಿಸಿ ಬರೆಯುವುದು.
2.ಅಭಾಕಸ್ ಬಳಸಿ ನೂರು, ಮತ್ತು ಬಿಡಿಯ ಸ್ಥಾನ ಬೆಲೆಯ ಕಲ್ಪನೆ ಮೂಡಿಸುವುದು.
3.ಮಿಂಚುಪಟ್ಟಿ ಬಳಸಿ ಸಂಖ್ಯೆಗಳ ಮಧ್ಯದಲ್ಲಿ ದೊಡ್ಡದು (>)ಮತ್ತು ಚಿಕ್ಕದು (<) ಚಿಹ್ನೆಗಳು ಹಾಕುವುದು.
4.999ವರೆಗಿನ ಸಂಖ್ಯೆಗಳನ್ನು ಮಿಂಚು ಪಟ್ಟಿಗಳನ್ನು ಬಳಸಿ ಹೆಚ್ಚು -ಕಡಿಮೆ -ಸಮ ಗುರ್ತಿಸುವುದು;, ಹಿಂದೆ -ಮುಂದೆ -ಮಧ್ಯದ ಸಂಖ್ಯೆಗಳನ್ನು ಕಂಡುಹಿಡಿಯುವುದು ಹಾಗೂ ಗರಿಷ್ಠ-ಕನಿಷ್ಠ ಸಂಖ್ಯೆಗಳನ್ನು ಪತ್ತೆಹಚ್ಚಿ ಏರಿಕೆ-ಇಳಿಕೆ ಕ್ರಮದಲ್ಲಿ ಜೋಡಿಸುವುದು.
ಘಟಕ:2.ಸಂಕಲನ,ವ್ಯವಕಲನ ಮತ್ತು ಮಿಶ್ರ ಕ್ರಿಯೆಗಳು
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಮೊತ್ತ 999ಕ್ಕೆ ಮೀರದಂತೆ ದಶಕ ರಹಿತ ಮತ್ತು ದಶಕ ಸಹಿತ ಮೂರಂಕಿ ಸಂಖ್ಯೆಗಳ ಅಡ್ಡ ಮತ್ತು ಕಂಬ ಸಾಲಿನ ಸಂಕಲನ ಮಾಡುವುದು.
2.ವ್ಯತ್ಯಾಸ 999ಕ್ಕೆ ಮೀರದಂತೆ ದಶಕ ಸಹಿತ ಮತ್ತು ದಶಕ ಸಹಿತ ಮೂರಂಕಿ ಸಂಖ್ಯೆಗಳ ಅಡ್ಡ ಮತ್ತು ಕಂಬ ಸಾಲಿನ ವ್ಯವಕಲನ ಮಾಡಿಸುವುದು.
3.999ವರೆಗಿನ ಸಂಖ್ಯೆಗಳ ಮಿಶ್ರ ಕ್ರಿಯೆಗಳು ಮತ್ತು ನಿತ್ಯ ಜೀವನದಲ್ಲಿ ಸಮಸ್ಯೆಗಳನ್ನು (ಬಾಯಿಲೆಕ್ಕ) ಬಿಡಿಸುವುದು.
ಘಟಕ:3.ಗುಣಾಕಾರ, ಭಾಗಾಕಾರ ಹಾಗೂ ಸರಿ-ಬೆಸ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಮೊತ್ತ 999ಕ್ಕೆ ಮೀರದಂತೆ ಮೂರಂಕಿ ಸಂಖ್ಯೆಗೆ ಒಂದಂಕಿ ಸಂಖ್ಯೆಯಿಂದ ಗುಣಾಕಾರ ಲೆಕ್ಕಗಳನ್ನು ಮಾಡುವುದು ತಿಳಿಸುವುದು.
2.ಕಡ್ಡಿಗಳನ್ನು ಅಡ್ಡ ಮತ್ತು ಕಂಬ ಸಾಲಿನ ಜೋಡಿಸಿ 6ರಿಂದ 15ರವರೆಗೆ ಮಗ್ಗಿಗಳನ್ನು ಬರೆಯುವುದು.
3.ಉದಾಹರಣೆಗಳೊಂದಿಗೆ ಭಾಗಾಕಾರ ಲೆಕ್ಕಗಳನ್ನು ಮಾಡುವುದು ತಿಳಿಸುವುದು.ಉದಾ:25ರಲ್ಲಿ 5ರಗುಂಪುಗಳನ್ನು ಮಾಡುವುದು.
4.ನಿತ್ಯ ಜೀವನದ ಸನ್ನಿವೇಶಗಳಲ್ಲಿ ಬರುವ ಗುಣಾಕಾರ ಮತ್ತು ಭಾಗಾಕಾರ ಸಮಸ್ಯೆಗಳನ್ನು ಬಿಡಿಸುವುದು.
5.ವಸ್ತುಗಳನ್ನು ಎರಡರ ಗುಂಪು ಮಾಡುವುದರ ಮೂಲಕ ಹಾಗೂ ಬಿಡಿ ಸ್ಥಾನದಲ್ಲಿ 0,2,4,6,8 ಬಂದಾಗ ಸರಿ-ಬೆಸ ಸಂಖ್ಯೆಗಳೆಂದು ಎಂದು ಗುರ್ತಿಸುವುದು.
ಘಟಕ:4.ಬಿನ್ನರಾಶಿ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ವಸ್ತುಗಳು ಮತ್ತು ಚಿತ್ರಗಳ ಮೂಲಕ ಭಿನ್ನರಾಶಿ ಕಲ್ಪನೆ ಮೂಡಿಸುವುದು.
2.ಉದಾಹರಣೆ ಮೂಲಕ ಸಮಛೇದವುಳ್ಳ ಸಮಬಿನ್ನರಾಶಿಗಳನ್ನು ಏರಿಕೆ-ಇಳಿಕೆ ಕ್ರಮದಲ್ಲಿ ಜೋಡಿಸುವುದು.
ಘಟಕ:4.ಹಣ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಉದಾಹರಣೆ ಮೂಲಕ ದೈನಂದಿನ ವ್ಯವಹಾರಗಳಲ್ಲಿ ನೋಟು ಮತ್ತು ನಾಣ್ಯಗಳ ಬಳಕೆ ಹಾಗೂ ಹಣದ ಸರಳ ವ್ಯವಹಾರಿಕ ಲೆಕ್ಕ್ಕಗಳನ್ನು ಬಿಡಿಸುವುದು.
2.ನಾಣ್ಯ ಮತ್ತು ನೋಟುಗಳನ್ನು ಉಪಯೋಗಿಸಿ ಪೈಸೆ ರೂಪಾಯಿಗೆ ಹಾಗೂ ರೂಪಾಯಿ ಪೈಸೆಗೆ ಪರಿವರ್ತಿಸುವುದು.
ಘಟಕ:5.ಕಾಲ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಇಂಗ್ಲಿಷ ಮತ್ತು ಕನ್ನಡ ತಿಂಗಳುಗಳ ಅನುಕ್ರಮವಾಗಿ ಹೇಳಿರುವುದು.
2.ತರಗತಿಯಲ್ಲಿ ಕ್ಯಾಲೆಂಡರ್ ತೋರಿಸಿ ಪಂಚಾಂಗ ಮತ್ತು ವಾರದ ಹೆಸರು ಹಾಗೂ ದಿನಾಂಕ ಗುರುತಿಸುವುದು.
3.ಗಡಿಯಾರದ ಮೂಲಕ ನಿಮಿಷ, ಗಂಟೆ ಹಾಗೂ ದಿನದ ಸಂಬಂಧ ತಿಳಿಸುವುದು.
ಘಟಕ:6.ಅಳತೆ,ತೂಕ ಮತ್ತು ದ್ರವ್ಯದ ಅಳತೆ.
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಉದಾಹರಣೆ ಮೂಲಕ ಉದ್ದವನ್ನು ಮೀಟರ್ ಮಾನದಲ್ಲಿ, ತೂಕವನ್ನು ಗ್ರಾಂನಲ್ಲಿ ಹಾಗೂ ಗಾತ್ರವನ್ನು ಲೀಟರ್ ನಲ್ಲಿ ಅಳೆಯುವ ಔಪಚಾರಿಕ ಮಾನಗಳೆಂದು ತಿಳಿಸುವುದು.
2.ಅವುಗಳ ನಡುವಿನ ಸಂಬಂಧವನ್ನು ಗುರ್ತಿಸುವುದು.
ಘಟಕ:7. ಕ್ಷೇತ್ರ ಫಲ ಮತ್ತು ಸುತ್ತಳತೆ
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಅನೌಪಚಾರಿಕ ಪದ್ದತಿಯಿಂದ ಸುತ್ತಳತೆ ಮತ್ತು ವಿಸ್ತೀರ್ಣ ಕಂಡುಹಿಡಿಯುವುದು.
2.ದಾರದಿಂದ ಆಕೃತಿಯ ಸುತ್ತಳತೆ ಕಂಡುಹಿಡಿಯುವುದು.
3.ಆಕೃತಿಯ ಒಳಭಾಗದಲ್ಲಿ 1ಸೆಂ.ಮೀ.ಚೌಕಗಳನ್ನು ಎಷ್ಟಿರುತ್ತದೆ, ಅದೇ ಅದರ ವಿಸ್ತೀರ್ಣ ಎಂದು ತಿಳಿಸುವುದು.
ಘಟಕ:8.ರೇಖಾಕೃತಿಗಳು ಮತ್ತು ಘನಾಕೃತಿಗಳು ಹಾಗೂ ಆಲೇಖಗಳು.
ಕಲಿಕಾಂಶ ಮತ್ತು ಅನುಕೂಲಿಸಲು ರೂಪಿಸಿದ ಚಟುವಟಿಕೆಗಳು:
1.ಪರಿಸರದಲ್ಲಿ ಕಂಡುಬರುವ ಘನಾಕೃತಿಗಳನ್ನು ಹೆಸರಿಸುವುದು.ಉದಾ:: ಬೆಂಕಿ ಪೊಟ್ಟಣ ಆಯತ ಘನ
2.ವಸ್ತುಗಳನ್ನು ಉಪಯೋಗಿಸಿ ಆಯತ,ತ್ರಿಭಾಷಾ,ವರ್ಗ ಮತ್ತು ವೃತ್ತಗಳನ್ನು ರಚಿಸುವುದು.
ತರಗತಿ:7ನೇ. ವಿಷಯ: ಗಣಿತ
ಅಧ್ಯಾಯ 1.ಪೂರ್ಣಾಂಕಗಳು.
ಅಧ್ಯಾಯ 2.ಭಿನ್ನರಾಶಿ ಮತ್ತು ದಶಮಾಂಶ ಗಳು.
ಅಧ್ಯಾಯ 3.ದತ್ತಾಂಶಗಳ ನಿರ್ವಹಣೆ
ಅಧ್ಯಾಯ 4.ಸರಳ ಸಮೀಕರಣಗಳು
ಅಧ್ಯಾಯ 5.ರೇಖೆಗಳು ಮತ್ತು ಕೋನಗಳು